ನವದೆಹಲಿ: ಸೇನೆ ಸೇರಬೇಕೆಂಬ ಹಂಬಲದಿಂದ ದೈಹಿಕ ಕ್ಷಮತೆಗಾಗಿ ಪ್ರತಿನಿತ್ಯ ಕೆಲಸ ಮುಗಿಸಿ 10 ಕಿ.ಮೀ. ಓಡುತ್ತಾ ಮನೆ ಸೇರುವ ಪ್ರದೀಪ್ ಮೆಹ್ರಾ ಎಂಬ ಯುವಕನ ವಿಡಿಯೋ ವೈರಲ್ ಆಗಿತ್ತು. ಈಗ ಆ ಯುವಕನಿಗೆ ನೆರವಿನ ಮಹಾಪೂರ ಹರಿದುಬರುತ್ತಿದೆ.