ನವದೆಹಲಿ : ಭಾರತದ ಹೆಮ್ಮೆಯ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 ಮಿಷನ್ನ ಪೋಟೋಗಳನ್ನು ಇಸ್ರೋ ನಿರಂತರವಾಗಿ ಹಂಚಿಕೊಳ್ಳುತ್ತಿದೆ. ಬುಧವಾರ ಬೆಳಗ್ಗೆ ಚಂದ್ರಯಾನ ಮಿಷನ್ನ ಪ್ರಗ್ಯಾನ್ ರೋವರ್ ವಿಕ್ರಂ ಲ್ಯಾಂಡರ್ನ ಚಿತ್ರವನ್ನು ಕ್ಲಿಕ್ಕಿಸಿದೆ. ಈ ಚಿತ್ರವನ್ನು ಇಸ್ರೋ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ.ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ‘ಸ್ಮೈಲ್ ಪ್ಲೀಸ್!’ ಇಂದು ಬೆಳಗ್ಗೆ ರೋವರ್