ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿರುವ ಪ್ರಧಾನಿ ಮೋದಿಗೆ ನಟ ಪ್ರಕಾಶ್ ರೈ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೊಂದು ಒಗ್ಗರಣೆಯನ್ನೂ ಹಾಕಿದ್ದಾರೆ. ಬಹುಭಾಷಾ ತಾರೆ ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕೆಲವು ನಾಯಕರ ನೀತಿ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಇದೀಗ ಜಯ ಗಳಿಸಿರುವ ಮೋದಿಗೆ ಅಭಿನಂದನೆ ಸಲ್ಲಿಸಿರುವವ ಪ್ರಕಾಶ್ ರೈ ಆದರೆ ಗೆಲುವು ನಿಜವಾಗಿಯೂ ನಿಮಗೆ ಖುಷಿ ಕೊಟ್ಟಿದೆಯೇ?