ನವದೆಹಲಿ: ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡುವ ವಿಚಾರವಾಗಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮತ್ತು ಪುತ್ರಿ ಶರ್ಮಿಷ್ಟ ಮುಖರ್ಜಿ ನಡುವೆ ಕಿತ್ತಾಟ ನಡೆದಿದೆ.‘ದಿ ಪ್ರೆಸಿಡೆಂಟ್ ಇಯರ್ಸ್’ ಎಂಬ ಪ್ರಣಬ್ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡುತ್ತಿರುವ ಪ್ರಕಾಶಕ ರೂಪ ಪಬ್ಲಿಕೇಷನ್ಸ್ ಗೆ ಪುಸ್ತಕ ಹೊರತರದಂತೆ ಪುತ್ರ ಅಭಿಜಿತ್ ತಾಕೀತು ಮಾಡಿದ್ದಾರೆ. ಆದರೆ ಪುತ್ರಿ ಶರ್ಮಿಷ್ಟ ಇದರ ಬಗ್ಗೆ ಅನಗತ್ಯ ವಿವಾದ ಮಾಡಬೇಡ. ಪುಸ್ತಕ ಬಿಡುಗಡೆಯಾಗಲಿ ಎಂದು ಆಗ್ರಹಿಸಿದ್ದಾರೆ.