ನವದೆಹಲಿ: ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಹಲಸಿನ ಹಣ್ಣು ತಿನ್ನುವ ಆಸೆಯಾಗಿತ್ತಂತೆ! ಆಸ್ಪತ್ರೆಗೆ ದಾಖಲಾಗುವ ಒಂದು ವಾರ ಮೊದಲು ಅವರು ಪುತ್ರನ ಬಳಿ ತಮ್ಮ ಆಸೆ ಹೇಳಿಕೊಂಡಿದ್ದರಂತೆ.ಸದ್ಯಕ್ಕೆ ಪ್ರಣಬ್ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. ಆದರೆ ಶಸ್ತ್ರಚಿಕಿತ್ಸೆಗೊಳಗಾಗುವ ಒಂದು ವಾರ ಮೊದಲು ಪುತ್ರ ಅಭಿಜಿತ್ ನನ್ನು ಕರೆದು ತಮ್ಮ ಹಳ್ಳಿಯಿಂದ ಹಲಸಿನ ಹಣ್ಣು ತರಿಸಿಕೊಡು ಎಂದು ಕೇಳಿಕೊಂಡಿದ್ದರಂತೆ. ಹಾಗಂತ ಸ್ವತಃ