ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುವ ವ್ಯಾನ್ನಿಂದ ಜಿಗಿದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ಜರುಗಿದೆ. ಮೆದಕ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರವೆಲ್ಲಿ ಗ್ರಾಮದ ಹತ್ತಿರ ಈ ಘಟನೆ ನಡೆದಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದ ಪೋತುರಾಜುಪಲ್ಲಿಯ ಕಲಾವತಿ(35) ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿಕೊಂಡು ಕೊಂಡಪಲ್ಲಿ ಗ್ರಾಮದಿಂದ ವ್ಯಾನ್ನಲ್ಲಿ ಏಳು ವರ್ಷದ ಮಗಳು ಶ್ರೀಶಾಳೊಂದಿಗೆ ಹತ್ತಿದ್ದಾಳೆ. ಈ ವೇಳೆ ಅಪರಿಚಿತ ವ್ಯಕ್ತಿಗಳಿಬ್ಬರು ಕಲಾವತಿಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾರೆ. ಗರ್ಭಿಣಿ