ನವದೆಹಲಿ: ಧೂಮಪಾನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪಂಜಾಬ್-ಬಿಹಾರ್ ನಡುವಿನ ಜಲಿಯನ್ ವಾಲಾ ಎಕ್ಸ್ ಪ್ರೆಸ್ ರೈಲಿನಲ್ಲಿ ಗರ್ಭಿಣಿ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ.ಚಿನತ್ ದೇವಿ (45) ಎಂಬಾಕೆ ಕೊಲೆಯಾದ ದುರ್ದೈವಿ. ಈಕೆ ತನ್ನ ಕುಟುಂಬದವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಧೂಮಪಾನ ಮಾಡುತ್ತಿದ್ದ ಸೋನು ಯಾದವ್ ಎಂಬಾತನಿಗೆ ಧೂಮಪಾನ ಮಾಡದಂತೆ ಕೇಳಿಕೊಂಡಿದ್ದಳು.ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಸೋನು ಯಾದವ್ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಕ್ಷಣ