ನವದೆಹಲಿ: ವಿಧಾನಸೌಧದ ಸುವರ್ಣ ಮಹೋತ್ಸವದ ಅಂಗವಾಗಿ ಅಧಿವೇಶನದಲ್ಲಿ ಭಾಷಣ ಮಾಡುವಾಗ ದೇವೇಗೌಡರ ಹೆಸರನ್ನು ಕೈ ಬಿಟ್ಟಿದ್ದಕ್ಕೆ ನೆನಪಿಸಿಕೊಂಡಿದ್ದ ರಾಷ್ಟ್ರಪತಿ ಕೋವಿಂದ್ ದೆಹಲಿಗೆ ತೆರಳಿದ ಮೇಲೂ ದೇವೇಗೌಡರನ್ನು ಸ್ಮರಿಸಿಕೊಂಡಿದ್ದಾರೆ. ದೆಹಲಿಗೆ ತೆರಳಿದ ಮೇಲೆ ಮಾಜಿ ಪ್ರಧಾನಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ ರಾಷ್ಟ್ರಪತಿ ಕೋವಿಂದ್ ಆರೋಗ್ಯ ವಿಚಾರಿಸಿದ್ದಲ್ಲದೆ, ಭಾಷಣದಲ್ಲಿ ಕಣ್ತಪ್ಪಿನಿಂದ ಹೆಸರು ಬಿಟ್ಟು ಹೋಗಿದ್ದಕ್ಕೆ ಕ್ಷಮೆ ಕೋರಿದರು.ಇದಕ್ಕೆ ಗೌಡರೂ ಈ ಘಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.