Widgets Magazine

ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನಲೆ; ಶುಭಕೋರಿದ ಅಂತರಾಷ್ಟ್ರೀಯ ಗಣ್ಯರು

ನವದೆಹಲಿ| pavithra| Last Modified ಗುರುವಾರ, 17 ಸೆಪ್ಟಂಬರ್ 2020 (11:45 IST)
ನವದೆಹಲಿ : ಪ್ರಧಾನಿ ಮೋದಿ 70ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಮೋದಿಗೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿಗೆ ರಷ್ಯಾದ ಅಧ್ಯಕ್ಷ ಪುಟಿನ್ ಹುಟ್ಟುಹಬ್ಬದ ಕೋರಿದ್ದಾರೆ.  ಪ್ರಧಾನಿಯಾಗಿ ನರೇಂದ್ರ ಮೋದಿ ಮಾಡಿರುವ ಸಾಧನೆ ಅಂತರಾಷ್ಟ್ರೀಯ ಮಟ್ಟದ ಗೌರವಕ್ಕೆ ಅರ್ಹ. ಆರ್ಥಿಕ, ಸಾಮಾಜಿಕ, ತಂತ್ರಜ್ಞಾನ ಈ 3 ಕ್ಷೇತ್ರಗಳಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ. ಭಾರತ, ರಷ್ಯಾ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ. ಅಭಿವೃದ್ಧಿ, ಶಾಂತಿ ಸ್ಥಾಪನೆಗಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೊಗಳುತ್ತಾ ಶುಭ ಹಾರೈಸಿದ್ದಾರೆ.  

ಹಾಗೇ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಓಲಿ  ಅವರು ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಉತ್ತಮ ಆರೋಗ್ಯ, ಸಂತೋಷ ಸಿಗಲಿ ಎಂದು ಶುಭ ಹಾರೈಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :