ನವದೆಹಲಿ: ಈಗಾಗಲೇ ಸಾಕಷ್ಟು ಬಿಗಿಭದ್ರತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆಮತ್ತಷ್ಟು ಭದ್ರತೆ ಒದಗಿಸಲು ಎಸ್ ಪಿಜಿ ನಿರ್ಧಾರ ಮಾಡಿದೆ. ಪ್ರಧಾನಿ ಅವರ ನಿವಾಸದ ಸುತ್ತ 2.8. ಕಿ.ಮೀ. ಉದ್ದದ ಸೆನ್ಸರ್ ಬೇಲಿ ಅಳವಡಿಕೆ ಮಾಡಲು ಪ್ರಧಾನಮಂತ್ರಿಗಳ ಭದ್ರತಾ ಹೊಣೆ ಹೊತ್ತುಕೊಂಡಿರುವ ವಿಶೇಷ ರಕ್ಷಣಾ ಗುಂಪು (ಎಸ್ ಪಿಜಿ) ನಿರ್ಧರಿಸಿದೆ. ಪ್ರಧಾನಿ ನಿವಾಸದೊಳಕ್ಕೆ ಅಕ್ರಮವಾಗಿ ಯಾರೇ ನುಸುಳಲು ಪ್ರಯತ್ನಿಸಿದರೆ ತಕ್ಷಣವೇ ಅಲಾರಾಂ ಹೊಡೆದುಕೊಳ್ಳುವ ಪೆರಿಮೀಟರ್ ಇನ್ಟ್ರೂಷನ್ ಡಿಟೆಕ್ಷನ್ ಸಿಸ್ಟಂ (ಪಿಡ್ಸ್)