ನವದೆಹಲಿ : ಮೂರು ರಾಷ್ಟ್ರಗಳ ನಿರ್ಣಾಯಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರಮೋದಿ ಅವರು, ಯುರೋಪಿಯನ್ ಪಾಲುದಾರರೊಂದಿಗೆ ಶಾಂತಿ, ಸಮೃದ್ಧಿಗಾಗಿ ಸಹಕಾರದ ಮನೋಭಾವ ಬಲಪಡಿಸಲು ಹಾಗೂ ಕೋವಿಡ್ ಆರ್ಥಿಕ ಚೇತರಿಕೆಯನ್ನು ಬಲಪಡಿಸಲು ಬರ್ಲಿನ್, ಕೋಪನ್ ಹೇಗನ್ ಮತ್ತು ಪ್ಯಾರಿಸ್ ಪ್ರವಾಸಕ್ಕೆ ತೆರಳುತ್ತಿದ್ದಾರೆ.ಅವರಿಂದು ಜರ್ಮನಿಯ ಫೆಡರಲ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಜರ್ಮನಿಯ ಬರ್ಲಿನ್ಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ಫ್ರೆಂಚ್ ಅಧ್ಯಕ್ಷ