ನವದೆಹಲಿ: ಅಜ್ಜಿ ಇಂದಿರಾ ಹಾಗೂ ಅಮ್ಮ ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿ ರಾಜ್ಯದತ್ತ ಮುಖ ಮಾಡ್ತಾರಾ ಅನ್ನೋ ಪಿಸುಮಾತುಗಳು ರಾಜ್ಯ ರಾಜಕಾರಣದಲ್ಲಿಹರಿದಾಡುತ್ತಿದೆ. ಮುಂದಿನ ತಿಂಗಳು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಿಂದಲೇ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹಾಗಾದ್ರೆ ಇಲ್ಲಿಂದ ಸ್ಪರ್ಧಿಸಿ ಅಜ್ಜಿ ಹಾಗೂ ಅಮ್ಮನಂತೆ ತಮ್ಮ ರಾಜಕೀಯ ಬದುಕಿನ ತಿರುವು ಪಡೆದುಕೊಳ್ಳಬಹುದು ಮುಂದಿನ ತಿಂಗಳು ಜೂನ್ 10 ರಂದು