ಹೊಸದಿಲ್ಲಿ : ಲಖೀಂಪುರ ಖೇರಿಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಸೋಮವಾರ ಸೀತಾಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆಕ್ರೋಶಗೊಂಡ ಪ್ರಿಯಾಂಕಾ, ನೀವು ಕೊಂದಿರುವ ವ್ಯಕ್ತಿಗಳಿಗಿಂತ ನಾನೇನೂ ಮುಖ್ಯವಾದವಳಲ್ಲ. ನನಗೆ ನೀವು ಕಾನೂನಾತ್ಮಕ ವಾರಂಟ್ ನೀಡಿ. ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ. ನೀವು ನನ್ನನ್ನು ಮುಟ್ಟಲೂ ಸಾಧ್ಯವಿಲ್ಲ’ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೂ, ಒತ್ತಾಯಪೂರ್ವಕವಾಗಿ ಅವರನ್ನು ವಶಕ್ಕೆ ಪಡೆದ ಪೊಲೀಸರು, ಪಿಎಸಿ ಅತಿಥಿಗೃಹದಲ್ಲಿ ಇರಿಸಿದ್ದಾರೆ. ಮೃತ ಅನ್ನದಾತರ