ನವದೆಹಲಿಯಿಂದ ಕೇವಲ 200 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಭರತ್ಪುರ್ ಜಿಲ್ಲೆಯ ಖಾಕ್ರನಾಗ್ಲಾ ಗ್ರಾಮದಲ್ಲಿ ಬೇಡಿಯಾ ಸಮುದಾಯ ವಾಸವಾಗಿದೆ. ಗ್ರಾಮದಲ್ಲಿ ಆಸ್ಪತ್ರೆಗಳಿಲ್ಲ. ವಿದ್ಯುತ್ ಸಂಪರ್ಕವಂತೂ ಇಲ್ಲವೇ ಇಲ್ಲ. ಶಿಥಿಲಾವಸ್ಥೆಯಲ್ಲಿರುವ ಹರಕು ಮನೆಗಳಲ್ಲಿ ಬುಡಕಟ್ಟು ಸಮುದಾಯ ವಾಸವಾಗಿದೆ. ಈ ಗ್ರಾಮದಲ್ಲಿ ವೇಶ್ಯಾವಾಟಿಕೆ ಪ್ರತಿಯೊಂದು ಮನೆಯ ಸಂಪ್ರದಾಯವಾಗಿದೆ. ದೇಶದಲ್ಲಿ ಹೆಣ್ಣು ಮಗುವೆಂದರೆ ಕುಟುಂಬಕ್ಕೆ ಭಾರ ಎನ್ನುವಂತೆ ಪರಿಗಣಿಸಿ ಕೆಲವು ಬಾರಿ ಭ್ರೂಣ ಹತ್ಯೆ ಮಾಡಲಾಗುತ್ತದೆ. ಆದರೆ, ರಾಜಸ್ಥಾನದ ಬೇಡಿಯಾ ಬುಡಕಟ್ಟು ಸಮುದಾಯ ಕುಟುಂಬದಲ್ಲಿ