ನವದೆಹಲಿ: ಪುಲ್ವಾಮಾದಲ್ಲಿ ಮತ್ತೆ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೂವರು ನರಹಂತಕರನ್ನು ಭಾರತೀಯ ಸೈನಿಕರು ಹತ್ಯೆ ಮಾಡಿದ್ದಾರೆ. ಪುಲ್ವಾಮದ ದಲಿಪೊರಾ ಏರಿಯಾದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಸೈನಿಕರು ಮೂವರನ್ನು ಹೊಡೆದುರುಳಿಸಿದ್ದಾರೆ. ಓರ್ವ ಯೋಧ ಹುತಾತ್ಮನಾಗಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಭಾರತೀಯ ಸೇನೆ ಹೇಳಿದೆ.ಕಣಿವೆ ರಾಜ್ಯದಲ್ಲಿ ಉಗ್ರರ ದಮನ ಕಾರ್ಯಾಚರಣೆ ನಡೆಸುತ್ತಿರುವ ಸೈನಿಕರು ನಿರಂತರವಾಗಿ ಉಗ್ರರಿಗಾಗಿ ಹುಡುಕಾಟ