ತಿರುವನಂತಪುರಂ: ಜನಪ್ರಿಯ ರೇಡಿಯೋ ಜಾಕಿ ಒಬ್ಬರನ್ನು ರೇಡಿಯೋ ಸ್ಟೇಷನ್ ಒಳಗೆಯೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೃತರನ್ನು ರಾಜೇಶ್ ಅಲಿಯಾಸ್ ರಸಿಕನ್ ರಾಜೇಶ್ ಎಂದು ಗುರುತಿಸಲಾಗಿದೆ. ರೆಡ್ ಎಫ್ ಎಂ ಚಾನೆಲ್ ನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಜೇಶ್ ಇತ್ತೀಚೆಗೆ ತಮ್ಮದೇ ಸ್ಟುಡಿಯೋ ಕಟ್ಟಿಕೊಂಡಿದ್ದರು. ಮಿಮಿಕ್ರಿ ಕಲಾವಿದರೂ ಆಗಿದ್ದ ರಾಜೇಶ್ ನಿನ್ನೆ ತಡರಾತ್ರಿ ಕಾರ್ಯಕ್ರಮ ಮುಗಿಸಿ ತಮ್ಮ ಪರಿಕರಗಳನ್ನು ಸ್ಟುಡಿಯೋದಲ್ಲಿ ಸ್ನೇಹಿತನೊಂದಿಗೆ ಜೋಡಿಸುತ್ತಿದ್ದಾಗ