ನೆಹರು -ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್ಬರೇಲಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗಾಂಧಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಅಜಯ್ ಅಗರ್ವಾಲ್ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿಲ್ಲ, ಬದಲಾಗಿ ಚಂಡಮಾರುತವಿದೆ. ಅದು ನನ್ನ ಚುನಾವಣಾ ದೋಣಿಯನ್ನು ದಾಟಿಸಲಿದೆ ಎಂದು ಹೇಳಿದ್ದಾರೆ. ಸೋನಿಯಾ 2004, 2006, 2009 ರಲ್ಲಿ ಈ ಪ್ರದೇಶದಲ್ಲಿ ಗೆಲುವನ್ನು ದಾಖಲಿಸಿದ್ದು, ಪ್ರತಿ ಬಾರಿ ಅವರು ಪಡೆದ ಮತಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.