ನಾವೆಲ್ಲರೂ ಆಂಜನೇಯರಾಗಬೇಕಿದೆ. ಯಾಕೆಂದರೆ ಗೋಮಾತೆ ಅಂದಿನ ಸೀತೆಯ ಹಾಗೆ ಶೋಕದಲ್ಲಿ ಮುಳುಗಿದ್ದಾಳೆ. ಗೋ ಮಾತೆಯ ಶೋಕವನ್ನು ನಾಶ ಮಾಡಬೇಕಿದೆ. ಆಂಜನೇಯ ಸೀತಾಮಾತೆಯನ್ನು ರಕ್ಷಿಸಿದ ಹಾಗೆ ನಾವೆಲ್ಲ ಗೋಮಾತೆಯನ್ನು ರಕ್ಷಿಸೋಣ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಜಗದೀಶನಾಡಿದ ಜಗನ್ನಾಟಕಕ್ಕೆ ರಾಮಾಯಣ ಎಂದು ಹೆಸರು. ಸೂತ್ರರೂ ಕೂಡ ಪಾತ್ರವಾಗುತ್ತಾರೆ ಅದರಲ್ಲಿ. ಎಲ್ಲ ಪಾತ್ರಗಳಲ್ಲಿ ಅತ್ಯಂತ