ನವದೆಹಲಿ: ವಿರೋಧ ಪಕ್ಷಗಳ ಎರಡು ಪ್ರಮುಖ ರಾಲಿಗಳನ್ನು ಅರ್ಧಕ್ಕೇ ಬಿಟ್ಟು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ನಾರ್ವೆ ರಾಷ್ಟ್ರಕ್ಕೆ ರಾಹುಲ್ ಗಾಂಧಿ ತೆರಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ನಾರ್ವೆಯ ವಿದೇಶಾಂಗ ಸಚಿವರ ಆಹ್ವಾನವನ್ನು ಮನ್ನಿಸಿ ಅಲ್ಲಿಗೆ ತೆರಳುತ್ತಿದ್ದೇನೆ. ಕೆಲವು ದಿನಗಳ ಕಾಲ ಓಸ್ಲೋದಲ್ಲಿರುತ್ತೇನೆ ಎಂದಿದ್ದಾರೆ.ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಿರೋಧಿ ಪಕ್ಷಗಳ ನೇತೃತ್ವದಲ್ಲಿ ಎರಡು ಬೃಹತ್ ರಾಲಿ ನಡೆಯಲಿದ್ದು,