ವಿರಾಟ್ ಕೊಹ್ಲಿ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯೂ ಕೊಟ್ಟರು ಒಂದು ಸವಾಲು!

ನವದೆಹಲಿ, ಶುಕ್ರವಾರ, 25 ಮೇ 2018 (08:47 IST)

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀಡಿದ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೂ ಒಂದು ಸವಾಲು ನೀಡಿದ್ದಾರೆ.
 
ಆದರೆ ಅದು ರಾಜಕೀಯ ಸವಾಲು. ಪೆಟ್ರೋಲ್, ಡೀಸೆಲ್ ಬೆಲೆ ಸರ್ವಾಧಿಕ ಮೊತ್ತ ತಲುಪಿದ ಹಿನ್ನಲೆಯಲ್ಲಿ ಕೇಂದ್ರವನ್ನು ಟೀಕಿಸುತ್ತಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ತಾಕತ್ತಿದ್ದರೆ ಪೆಟ್ರೋಲ್ ಬೆಲೆ ಇಳಿಕೆ ಮಾಡಿ ನೋಡೋಣ ಎಂದು ಸವಾಲು ಸ್ವೀಕರಿಸಲು ಟ್ವಿಟರ್ ನಲ್ಲಿ ಆಹ್ವಾನವಿತ್ತಿದ್ದಾರೆ.
 
‘ಪ್ರಧಾನಿ ಮೋದಿಯವರೇ ವಿರಾಟ್ ಕೊಹ್ಲಿಯವರ ಫಿಟ್ ನೆಸ್ ಸವಾಲು ಸ್ವೀಕರಿಸಿದ ಸಂಗತಿ ಕೇಳಿ ಖುಷಿಯಾಯಿತು. ನಾನೂ ಒಂದು ಸವಾಲು ಹಾಕುತ್ತೇನೆ. ಇಂಧನ ಬೆಲೆ ಇಳಿಕೆ ಮಾಡುತ್ತೀರಾ ಅಥವಾ ಕಾಂಗ್ರೆಸ್ ದೇಶದಾದ್ಯಂತ ಅಭಿಯಾನ ನಡೆಸಿ ನಿಮ್ಮಿಂದ ಹಾಗೆ ಮಾಡಿಸಬೇಕೇ?  ನಾನು ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇನೆ. #ಫ್ಯುಯೆಲ್ ಚಾಲೆಂಜ್’ ಎಂದು ರಾಹುಲ್ ಹೊಸ ಸವಾಲಿನ ಅಭಿಯಾನ ಆರಂಭಿಸಿದ್ದಾರೆ. ಆದರೆ ಇದಕ್ಕೆ ಮೋದಿ ಪ್ರತಿಕ್ರಿಯೆ ಏನು ಎಂದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜನಸೇನಾ ಪಕ್ಷದ ನಾಯಕರಾದ ನಟ ಪವನ್ ಕಲ್ಯಾಣ್ ಮನಸ್ಸು ಜನರ ಕಷ್ಟಕ್ಕೆ ಸ್ಪಂದಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ

ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಕಾಯಿಲೆಯಿಂದ ...

news

ಆರ್‌ಆರ್ ನಗರ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಎದುರಾಗಿದೆ ಸಂಕಷ್ಟ

ಬೆಂಗಳೂರು : ಈಗಾಗಲೇ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿಯಾಯ್ತು. ಆದರೆ ಈ ನಡುವೆ ...

news

ಗದಗ ಜಿಲ್ಲೆಯಲ್ಲಿ ಮಹಾಮಾರಿ ವೈರಸ್ ನಿಫಾ ವೈರಸ್ ಹರಡಿರುವ ಶಂಕೆ

ಗದಗ: ಮಾರಣಾಂತಿಕ ಮಹಾಮಾರಿ ಶಂಕಿತ ನೀಫಾ ವೈರಸ್ ಗದಗ ಜಿಲ್ಲೆಗೂ ಕಾಲಿಟ್ಟಿದೆ ಎನ್ನಲಾಗುತ್ತಿದೆ. ಗದಗ ...

news

ಕಾಂಗ್ರೆಸ್ ಪಕ್ಷದ ಪತನಕ್ಕೆ ಇದು ಮೊದಲ ಮೆಟ್ಟಿಲು: ಶ್ರೀರಾಮುಲು

ಬೆಂಗಳೂರು: ನಿನ್ನೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ತೃತಿಯ ರಂಗದವರು ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದ ...