ಪ್ರಧಾನಿ ಮೋದಿ ಟ್ಯೂಬ್ ಲೈಟ್ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು

ನವದೆಹಲಿ| pavithra| Last Modified ಶನಿವಾರ, 8 ಫೆಬ್ರವರಿ 2020 (09:33 IST)
ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟ್ಯೂಬ್ ಲೈಟ್ ಎಂದ ಪ್ರಧಾನಿ ಮೋದಿಗೆ ಇದೀಗ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.


ಗುರುವಾರ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಯವರನ್ನು ಟ್ಯೂಬ್ ಲೈಟ್ ಗೆ ಹೋಲಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರು ಶುಕ್ರವಾರ ಸಂಸತ್ತಿನ ಹೊರಗೆ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಗಾಂಧಿ , ಮೋದಿ ಅವರು ಮೊದಲು ಪ್ರಧಾನಿಯಂತೆ ವರ್ತಿಸಲಿ ಎಂದು ಕಿಡಿಕಾರಿದ್ದಾರೆ.


ಸಾಮಾನ್ಯವಾಗಿ ಪ್ರಧಾನಿಯವರಿಗೆ ನಿಗದಿತ ನಡಾವಳಿ ಇರುತ್ತದೆ. ಪ್ರಧಾನಿ ಆದವರ ಧಾಟಿಯೇ ಬೇರೆ ಇರುತ್ತದೆ. ಆದರೆ ನಮ್ಮ ಪ್ರಧಾನಿಗೆ ಇದ್ಯಾವುದು ಇಲ್ಲ. ಅವರು ಪ್ರಧಾನಿಯಂತೆ ವರ್ತಿಸಲ್ಲ ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :