ಪಣಜಿ: ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡ ರಾಹುಲ್ ಗಾಂಧಿಗೆ ಈ ವರ್ಷ ಹೊಸ ವರ್ಷಾಚರಣೆ ವಿಶೇಷವಾಗಿತ್ತು. ಗೋವಾದ ರೆಸಾರ್ಟ್ ನಲ್ಲಿ ರಾಹುಲ್ ಹೊಸ ವರ್ಷಾಚರಣೆ ಮಾಡಿಕೊಂಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಕಾಂಗ್ರೆಸ್ ನ ಮಾಜಿ ಧುರೀಣೆ, ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಗೋವಾ ರೆಸಾರ್ಟ್ ನಲ್ಲಿ ಕಳೆದ ಒಂದು ವಾರದಿಂದ ಬೀಡು ಬಿಟ್ಟಿದ್ದಾರೆ.ಇದೀಗ ರಾಹುಲ್ ಕೂಡಾ ಅಮ್ಮನಿರುವ ರೆಸಾರ್ಟ್ ಗೆ ತೆರಳಿದ್ದು ಹೊಸ ವರ್ಷವನ್ನು ಜತೆಯಾಗಿಯೇ ಆಚರಿಸಿಕೊಂಡಿದ್ದಾರೆ.