ನವದೆಹಲಿ: ಚಳಿಗಾಲದ ಅಧಿವೇಶನ ಯಾವಾಗ ನಡೆಯುತ್ತದೆಂಬ ಬಗ್ಗೆ ದಿನ ನಿಗದಿಯಾಗದೇ ಇರುವುದು ಪ್ರತಿಪಕ್ಷಗಳಿಗೆ ಟೀಕೆ ಮಾಡಲು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಟ್ವಿಟರ್ ನಲ್ಲಿ ಪ್ರಧಾನಿ ಮೋದಿಗೆ ಸವಾಲೆಸೆದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಾಕತ್ತಿದ್ದರೆ ಸಂಸತ್ತಿಗೆ ಬನ್ನಿ ಹಾಗೂ ರಾಫೇಲ್ ಒಪ್ಪಂದ ವಿಷಯದಲ್ಲಿ ಏನು ಮುಚ್ಚಿಟ್ಟಿದ್ದೀರಿ ಎಂಬುದು ಇಡೀ ದೇಶಕ್ಕೆ ಗೊತ್ತಾಗಲಿ ಎಂದಿದ್ದಾರೆ.ರಕ್ಷಣಾ ತಂತ್ರಜ್ಞಾನದ ಅನುಭವವೇ ಇಲ್ಲದ ಫ್ರಾನ್ಸ್ ಮೂಲದ ರಾಫೇಲ್ ಕಂಪನಿಗೆ ರಕ್ಷಣಾ ಒಪ್ಪಂದದ ಗುತ್ತಿಗೆ ನೀಡಿದ್ದೇಕೆ