ನವದೆಹಲಿ: ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಗೆ ಶೀಘ್ರ ಗುಣಮುಖರಾಗುವಂತೆ ಹಲವರು ಹಾರೈಸುತ್ತಿದ್ದಾರೆ.ಇದೀಗ ಆ ಸಾಲಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸೇರಿಕೊಂಡಿದ್ದಾರೆ. ಅರುಣ್ ಜೇಟ್ಲಿ ಬಗ್ಗೆ ರಾಜಕೀಯವಾಗಿ ಎಷ್ಟೇ ವೈರುಧ್ಯಗಳಿದ್ದರೂ ಅದನ್ನೆಲ್ಲಾ ಮರೆತು ಆರೋಗ್ಯ ವಿಚಾರಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ನಿಜಕ್ಕೂ ಈ ಸುದ್ದಿ ಕೇಳಿ ಬೇಸರವಾಗಿದೆ. ಅರುಣ್ ಜೇಟ್ಲಿ ಬೇಗ ಗುಣಮುಖರಾಗಲೆಂದು ಹಾರೈಸುವೆ ಎಂದು ಸಂದೇಶ ಬರೆದಿದ್ದಾರೆ.ತಾಜಾ