ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ರ್ಯಾಲಿಯೊಂದರಲ್ಲಿ ಹೊಸ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ತಮಗಿಷ್ಟ ಬಂದ ಹಾಗೆ ಭಗವದ್ಗೀತೆಯ ಸಾಲುಗಳನ್ನೇ ತಿರುಚಿದ್ದಾರೆ ಎಂದಿದ್ದಾರೆ ರಾಹುಲ್ ಗಾಂಧಿ. ಭಗವದ್ಗೀತೆಯಲ್ಲಿ ನಿಮ್ಮ ಕರ್ತವ್ಯ ನಿರ್ವಹಿಸಿ, ಫಲದ ಬಗ್ಗೆ ಚಿಂತಿಸದಿರಿ ಎಂದಿದೆ.ಆದರೆ ಮೋದಿ ಜೀ ಇತರರ ಫಲವನ್ನೂ ನೀವು ಅನುಭವಿಸಿ, ಯಾವುದೇ ಕೆಲಸ ಮಾಡದಿದ್ದರೂ ಪರವಾಗಿಲ್ಲ ಎನ್ನುತ್ತಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.