ಅಹಮ್ಮದಾಬಾದ್: ಗುಜರಾತ್ ಮತದಾರರನ್ನು ಸೆಳೆಯಲು ರ್ಯಾಲಿ ಜತೆಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿವಾದಕ್ಕೊಳಗಾಗಿದ್ದಾರೆ. ಚುನಾವಣಾ ಪ್ರಚಾರಕ್ಕೆಂದು ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ನಿನ್ನೆ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಧರ್ಮದ ಬಗ್ಗೆ ವಿವಾದ ಅಂಟಿಕೊಂಡಿದೆ.ದೇವಾಲಯಕ್ಕೆ ಭೇಟಿ ನೀಡಿರುವ ರಾಹುಲ್ ತೆರಳುವ ಮುನ್ನ ಹಿಂದೂಯೇತರ ರಿಜಿಸ್ಟ್ರಿ ಪುಸ್ತಕದಲ್ಲಿ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಬಿಜೆಪಿ ಟ್ವೀಟ್ ಮಾಡಿದ್ದು ರಾಹುಲ್ ಹಿಂದೂ