ಭಾಷಣದ ನಡುವೆ ಮೈಕ್ ಆಫ್ ಆಗಿದ್ದಕ್ಕೆ ಅಮಿತ್ ಶಾ ಕಾರಣ ಎಂದ ರಾಹುಲ್ ಗಾಂಧಿ!

ನವದೆಹಲಿ| Krishnaveni K| Last Modified ಶುಕ್ರವಾರ, 17 ಆಗಸ್ಟ್ 2018 (09:21 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೈಕ್ ಆಫ್ ಆಯಿತು. ಇದಕ್ಕೆ ಅಮಿತ್ ಶಾ ಅವರೇ ಕಾರಣ ಎಂದು ತಮಾಷೆ ಮಾಡಿದ್ದಾರೆ.


ರಾಹುಲ್ ಭಾಷಣದ ನಡುವೆ ದೊಡ್ಡ ಶಬ್ಧ ಮಾಡುತ್ತಾ ಮೈಕ್ ಇದ್ದಕ್ಕಿದ್ದಂತೆ ಆಫ್ ಆಯಿತು. ನಂತರ ಮೈಕ್ ಹೇಗೋ ಆನ್ ಮಾಡಲಾಯಿತು. ಆನ್ ಆದ ಬಳಿಕ ರಾಹುಲ್ ‘ಇದು ಅಮಿತ್ ಶಾ ಅವರೇ ಮೈಕ್ ಆಫ್ ಮಾಡಿದ್ದು’ ಎಂದು ತಮಾಷೆ ಮಾಡಿದರು.


ಮೈಕ್ ಆಫ್ ಆಗುವ ಮೊದಲು ರಾಹುಲ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಹೀಗಾಗಿಯೇ ರಾಹುಲ್ ಈ ರೀತಿ ಹಾಸ್ಯ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :