ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ, 2023ರ ಕೊನೆಯ ದಿನದಂದು ಮನೆಯಲ್ಲಿಯೇ ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿ ವರ್ಷದ ಕೊನೆಯನ್ನು ವಿಶೇಷವಾಗಿಸಿದ್ದಾರೆ.. ಸ್ವತಃ ತಮ್ಮ ಕಿಚನ್ ಗಾರ್ಡನ್ನಿಂದ ತಾಜಾ ಹಣ್ಣುಗಳನ್ನು ಕಿತ್ತು ತಂದು ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿದ್ದಾರೆ.ಇನ್ನು ಈ ರೆಸಿಪಿ ಹೇಗೆ ಮಾಡುವುದು ಎಂದು ಕೂಡ ವಿಡಿಯೋ ಮೂಲಕ ಹೇಳಿಕೊಟ್ಟಿದ್ದಾರೆ. ತಮ್ಮ ಕಿಚನ್ ಗಾರ್ಡನ್ನಿಂದ ತಾಯಿ ಹಾಗೂ ಮಗ ಕಿತ್ತಳೆಗಳನ್ನು ಕಿತ್ತು ತರುತ್ತಾರೆ..