ನವದೆಹಲಿ: ಇನ್ನು 10-15 ವರ್ಷಗಳಲ್ಲಿ ಅಮೇಠಿಯನ್ನು ಸಿಂಗಾಪುರ್ ಅಥವಾ ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದಷ್ಟು ಆಧುನೀಕರಣಗೊಳಿಸುವುದಾಗಿ ಆ ಕ್ಷೇತ್ರ ಸಂಸದರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.ನಾವು ಅಮೇಠಿಗಾಗಿ ದೊಡ್ಡ ದೊಡ್ಡ ಯೋಜನೆಗಳನ್ನು ತಂದಿದ್ದೆವು. ಆದರೆ ಈಗಿನ ಕೇಂದ್ರ ಸರ್ಕಾರ ಅದಕ್ಕೆಲ್ಲಾ ಕಲ್ಲು ಹಾಕಿದೆ. ಹಾಗಿದ್ದರೂ ಮುಂದಿನ 15 ವರ್ಷದಲ್ಲಿ ಅದನ್ನೆಲ್ಲಾ ಮರಳಿ ತಂದು ಜನರು ಕ್ಯಾಲಿಫೋರ್ನಿಯಾ, ಸಿಂಗಾಪುರ ನಗರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ ಅಮೇಠಿಯನ್ನೂ ಅದೇ ಪಟ್ಟಿಯಲ್ಲಿ ಸೇರಿಸುವಂತೆ