ಕೊವಿಡ್ ವಿರುದ್ಧ ಹೋರಾಡಲು ಲಾಕ್ ಡೌನ್ ಒಂದೇ ಅಸ್ತ್ರ-ರಾಹುಲ್ ಗಾಂಧಿ

ನವದೆಹಲಿ| pavithra| Last Updated: ಮಂಗಳವಾರ, 4 ಮೇ 2021 (11:12 IST)
ನವದೆಹಲಿ : ದೇಶದಲ್ಲಿ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ಕೊವಿಡ್ ವಿರುದ್ಧ ಹೋರಾಡಲು ಲಾಕ್ ಡೌನ್ ಒಂದೇ ಅಸ್ತ್ರ. ನ್ಯಾಯ್ ಯೋಜನೆ ಜಾರಿ ಜತೆ ಲಾಕ್ ಡೌನ್ ಜಾರಿ ಮಾಡಿ. ಸರ್ಕಾರದ ನಿಷ್ಕ್ರಿಯತೆಯಿಂದ ಅಮಾಯಕರು ಸಾಯುತ್ತಿದ್ದಾರೆ. ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.> > ದೇಶಾದ್ಯಂತ ಕೊರೊನಾ 2ನೇ ಅಲೆ ಅಬ್ಬರ ಜೋರಾಗಿದ್ದು, ಅನೇಕ ಜನರು ಕೊರೊನಾಕ್ಕೆ ಬಲಿಯಾದರೂ ಇನ್ನು ಹಲವರು ಸೋಂಕಿನಿಂದ ನರಳುತ್ತಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ, ಬೆಡ್ ಗಳ ಕೊರತೆ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಸರ್ಕಾರಕ್ಕೆ ಈ ಸಲಹೆಯನ್ನು ನೀಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :