ನವದೆಹಲಿ: ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮವೊಂದರಲ್ಲಿ ತಮಗೆ ಪ್ರಧಾನಿ ಪಟ್ಟದ ಮೇಲೆ ಆಸೆಯಿಲ್ಲ ಎಂದಿದ್ದಾರೆ. ಸದ್ಯಕ್ಕೆ ಪ್ರಧಾನಿಯಾಗುವ ಕನಸು ನನಗಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಷ್ಟೇ ಸದ್ಯದ ಗುರಿ ಎಂದಿದ್ದಾರೆ.ಇದಕ್ಕಿಂತ ಮೊದಲು ರಾಹುಲ್ ಒಮ್ಮೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಪ್ರಧಾನಿಯಾಗಲು ಸಿದ್ಧ ಎಂದಿದ್ದರು. ಆದರೆ ಅದಾದ ಬಳಿಕ ವಿಪಕ್ಷ ಬಿಜೆಪಿ ವ್ಯಾಪಕ ಟೀಕೆ ಮಾಡಿದ್ದಲ್ಲದೆ, ಕಾಂಗ್ರೆಸ್ ನ ಮೈತ್ರಿ