ಕೊರೋನಾಗೆ ಹೊಸ ಹೆಲ್ಪ್ ಲೈನ್ ಆರಂಭಿಸಿದ ರಾಹುಲ್ ಗಾಂಧಿ

ನವದೆಹಲಿ| Krishnaveni K| Last Modified ಶನಿವಾರ, 1 ಮೇ 2021 (12:29 IST)
ನವದೆಹಲಿ: ಕೊರೋನಾ ಬಗ್ಗೆ ಅನುಮಾನಗಳಿದ್ದರೆ ಅಥವಾ ಯಾವುದೇ ರೀತಿಯ ಸಹಾಯ ಬೇಕಾಗಿದ್ದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಲ್ಪ್ ಲೈನ್ ಒಂದನ್ನು ಆರಂಭಿಸಿದ್ದಾರೆ.
 

‘ಹಲೋ ಹೆಲ್ಪ್ ಲೈನ್’ ಎಂಬ ಹೆಸರಿನಲ್ಲಿ ಸಹಾಯವಾಣಿಯೊಂದನ್ನು ತೆರೆದಿದ್ದು, ನಿಮ್ಮ ಎಲ್ಲಾ ಅನುಮಾನಗಳಿಗೆ, ಸಮಸ್ಯೆಗಳಿಗೆ ಈ ಹೆಲ್ಪ್ ಲೈನ್ ಗೆ ಕರೆ ಮಾಡಿದರೆ ಉತ್ತರ ಸಿಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
 
‘ಭಾರತ ಈ ಸಂದರ್ಭದಲ್ಲಿ ಒಗ್ಗಟ್ಟಾಗಿರಬೇಕು. ನಿಮಗೆ ಯಾವುದೇ ರೀತಿಯ ವೈದ್ಯಕೀಯ ಸಲಹೆ ಬೇಕಾಗಿದ್ದಲ್ಲಿ 09983836838 ಎಂಬ ಸಹಾಯವಾಣಿಗೆ ಕರೆ ಮಾಡಿ ಸಲಹೆ ಪಡೆಯಬಹುದು’ ಎಂದು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :