ನವದೆಹಲಿ : ಕೊರೊನಾ ಭೀತಿ ನಡುವೆಯೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ, ಜನರಿಗಾಗಿ ಕೆಲಸ ಮಾಡುತ್ತಿರುವವರು ನಿಜವಾದ ದೇಶಭಕ್ತರು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶ ಸಂಕಷ್ಟದಲ್ಲಿರುವಾಗ ನಿಸ್ವಾರ್ಥದಿಂದ ದುಡಿಯುವುದೇ ನಿಜವಾದ ದೇಶಭಕ್ತಿ. ಈ ಕಷ್ಟಕರ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತರು ನಿಜವಾದ ದೇಶಭಕ್ತರು . ಇವರು ಮುಖ್ಯವಾಹಿನಿಯಿಂದ ದೂರವುಳಿದು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ. ದೇಶವಾಸಿಗಳಾಗಿ ನಾವು ಅವರಿಗೆ