ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಗ್ಗೆ ಹಲವು ಚರ್ಚೆಗಳಾಗುತ್ತಿವೆ. ಅವರ ಖಾತೆಯನ್ನುಇನ್ಯಾರೋ ನಿರ್ವಹಿಸುತ್ತಿದ್ದಾರೆಂಬ ಟೀಕೆಗಳಿಗೆ ರಾಹುಲ್ ತಿರುಗೇಟು ನೀಡಿದ್ದಾರೆ. ಆದರೆ ಇದಕ್ಕೆ ಬಿಜೆಪಿಯಿಂದ ತಕ್ಕ ಎದಿರೇಟನ್ನೂ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ರಾಹುಲ್ ಖಾತೆಯನ್ನು ಬೇರೆ ಯಾರೋ ನಿರ್ವಹಿಸುತ್ತಿದ್ದಾರೆ, ಅವರ ಖಾತೆಯಲ್ಲಿ ಹಲವು ನಕಲಿ ಖಾತೆಗಳಿವೆ, ರಿಟ್ವೀಟ್ ದಾಖಲೆಗಳಲ್ಲೇ ನಕಲಿ ಎಂಬ ಆರೋಪಗಳಿಗೆ ರಾಹುಲ್ ವಿಡಿಯೋ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.ತಮ್ಮ