ಪ್ರಿಯಾ ವಾರಿಯರ್ ರನ್ನೂ ಹಿಂದಿಕ್ಕಿತು ರಾಹುಲ್ ಗಾಂಧಿ ಕಣ್ಸನೆ!

ನವದೆಹಲಿ| Krishnaveni K| Last Modified ಶುಕ್ರವಾರ, 20 ಜುಲೈ 2018 (15:48 IST)
ನವದೆಹಲಿ: ಇಂದಿನ ಸಂಸತ್ತು ಅಧಿವೇಶನ ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು. ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾ, ಸೀದಾ ಪ್ರಧಾನಿ ಮೋದಿಯನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಬಳಿಕ ತಮ್ಮ ಸೀಟ್ ನಲ್ಲಿ ಕುಳಿತು ಕಣ್ ಮಿಟುಕಿಸಿದ್ದು, ಭಾರೀ ವೈರಲ್ ಆಗಿದೆ.


ತಮ್ಮ ಭಾಷಣದ ನಡುವೆ ಸೀದಾ ನಡೆದು ಪ್ರಧಾನಿ ಮೋದಿ ಕುಳಿತಲ್ಲಿಗೆ ಬಂದ ರಾಹುಲ್, ಮೋದಿಯವರನ್ನು ಅಪ್ಪಿಕೊಂಡಿದ್ದಲ್ಲದೆ, ಕೈ ಕುಲುಕಿ ಬಂದರು. ರಾಹುಲ್ ವರ್ತನೆಗೆ ಇಡೀ ಸದನವೇ ನಗೆಗಡಲಲ್ಲಿ ತೇಲಿತು.


ಬಳಿಕ ತಮ್ಮಆಸನದತ್ತ ಬಂದ ರಾಹುಲ್ ಕಣ್ ಮಿಟುಕಿಸಿದ ದೃಶ್ಯಗಳು ಭಾರೀ ವೈರಲ್ ಆಗಿವೆ. ರಾಹುಲ್ ಕಣ್ಸನ್ನೆ ಎಷ್ಟು ಜನಪ್ರಿಯವಾಗಿದೆಯೆಂದರೆ ಹಿಂದೊಮ್ಮೆ ಕಣ್ಸನ್ನೆ ಸ್ಟಾರ್ ಪ್ರಿಯಾ ವಾರಿಯರ್ ವಿಡಿಯೋ ವೈರಲ್ ಆದಷ್ಟೇ ರಾಹುಲ್ ಕಣ್ಸನ್ನೆ ಬಗ್ಗೆಯೂ ಜನ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡ ತೊಡಗಿದ್ದಾರೆ. ಅಂತೂ ತಮಾಷೆ ಮಾಡಿ ರಾಹುಲ್ ಇಂದು ಸದನದಲ್ಲಿ ಫುಲ್ ಮಿಂಚಿಂಗ್ ಆಗಿದ್ದಂತೂ ಸುಳ್ಳಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :