ನವದೆಹಲಿ : ಇಡೀ ದೇಶವೇ ಬೆಚ್ಚಿಬೀಳುವಂತಹ ದೊಡ್ಡ ಮಟ್ಟದ ಉಗ್ರ ದಾಳಿಗಳು ಕಳೆದ ಏಳು ವರ್ಷಗಳಲ್ಲಿ ಒಂದೂ ಕೂಡ ಆಗಿಲ್ಲ. ಆ ಮಟ್ಟಿಗೆ ದೇಶವು ಸುರಕ್ಷಿತವಾಗಿದೆ. ಹಲವು ಕಡೆಗಳಲ್ಲಿ ಉಗ್ರರ ದಾಳಿ ಸಂಚನ್ನು ಮುಂಚಿತವಾಗಿಯೇ ವಿಫಲಗೊಳಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ. ಗುಜರಾತಿನಲ್ಲಿ ಮೂರು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಕಾರ್ಯಾಚರಣೆಗಳನ್ನು