ಉ.ಪ್ರದೇಶ: ಬಿಜೆಪಿ ಸಿಎಂ ಅಭ್ಯರ್ಥಿ ರೇಸ್‌ನಲ್ಲಿ ವರುಣ್ ಗಾಂಧಿ, ಸ್ಮೃತಿ ಇರಾನಿ, ಆದಿತ್ಯನಾಥ್

ನವದೆಹಲಿ| Rajesh patil| Last Modified ಬುಧವಾರ, 1 ಜೂನ್ 2016 (19:53 IST)
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಬಿಜೆಪಿಯ ಸಿಎಂ ಅಭ್ಯರ್ಥಿಯನ್ನಾಗಿ ಯಾರನ್ನು ಬಿಂಬಿಸಬೇಕು ಎನ್ನುವ ಗೊಂದಲ ಪಕ್ಷದ ಹೈಕಮಾಂಡ್‌ನ್ನು ಕಾಡುತ್ತಿದೆ.
ಉತ್ತರಪ್ರದೇಶದಲ್ಲಿ ಉತ್ತಮ ಸಿಎಂ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಬಿಜೆಪಿ ಅಂತರಿಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.


ಇತ್ತಿಚೆಗೆ ದೆಹಲಿಯ ಕೆಲ ಸಂಪಾದಕರುಗಳನ್ನು ಚಹಾಕೂಟದ ಚರ್ಚೆಹೆ ಆಹ್ವಾನಿಸಿದ್ದ ಅಮಿತ್ ಶಾ, ಸಿಎಂ ಅಭ್ಯರ್ಥಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ, ಸಮಾಜವಾದಿ ಪಕ್ಷವನ್ನು ಪ್ರಮುಖ ಎದುರಾಳಿ ಎಂದು ಘೋಷಿಸಿರುವುದಾಗಿ ತಿಳಿಸಿದ್ದಾರೆ.


ಅಂತರಿಕ ಸಮೀಕ್ಷೆ ನಡೆಸಿದ ತಂಡ ಮೂರು ಹೆಸರುಗಳನ್ನು ಅಂತಿಮಗೊಳಿಸಿದೆ. ಸ್ಮೃತಿ ಇರಾನಿ, ವರುಣ್ ಗಾಂಧಿ ಮತ್ತು ಯೋಗಿ ಆದಿತ್ಯನಾಥ್ ಸಿಎಂ ಅಭ್ಯರ್ಥಿಯ ರೇಸ್‌ನಲ್ಲಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜನಪ್ರಿಯ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಮತ್ತೆ ಸಿಎಂ ಅಭ್ಯರ್ಥಿಯಾಗಿ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :