ನವದೆಹಲಿ : ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಂದಿರವನ್ನು ಎಲ್ಲಿ ಬೇಕಾದರೂ ಕಟ್ಟಬಹುದು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಗಿರಿರಾಜ್ ಅವರು ಫಾರೂಖ್ ಅಬ್ದುಲ್ಲಾ ಹಜ್ ನ್ನು ಬಿಟ್ಟು ಬೇರೆಲ್ಲಿಗಾದರೂ ಹೋಗಬಹುದೇ ಎಂದು ಕೇಳುತ್ತೇನೆ ಎಂದು ಹೇಳಿದ್ದಾರೆ. ಮೀರತ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್, ಸರ್ಕಾರದ ಹಂಗಿನಲ್ಲಿ ರಾಮಮಂದಿರ ನಿರ್ಮಿಸುವುದಿಲ್ಲ, ಬದಲಿಗೆ ನೂರು ಕೋಟಿ ಹಿಂದುಗಳ ಎದೆಗಾರಿಕೆಯ ಬೆಂಬಲದೊಂದಿಗೆ ರಾಮಮಂದಿರ ನಿರ್ಮಿಸಲಾಗುತ್ತದೆ