ದಕ್ಷಿಣ ಕನ್ನಡ : ಸಾಲಾಗಿ ಹಚ್ಚಿಟ್ಟ ದೀಪಗಳ ಸಾಲಿನಲ್ಲಿ ಅಯೋಧ್ಯೆಯ ಶ್ರೀರಾಮನ ಚಿತ್ರ ಬಿಡಿಸುವ ಮೂಲಕ ಮೂಡುಬಿದಿರೆ ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಹೊಸ ಕಲಾಕೃತಿ ಮೂಡಿಸಲಾಗಿದೆ. ಕಲಾವಿದರಾದ ತಿಲಕ್ ಕುಲಾಲ್, ರೋಹಿತ್ ನಾಯ್ಕ್, ಅಕ್ಷಿತ್ ಕುಲಾಲ್ ಊರಿನ ಜನರ ಸಹಕಾರದೊಂದಿಗೆ ಈ ವಿಶಿಷ್ಟ ಕಲಾಕೃತಿ ಮೂಡಿಸಿದ್ದಾರೆ.