ಬೆಂಗಳೂರು: ಪ್ರಧಾನಿ ಪತ್ನಿ ಜಶೋದಾಬೆನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಬಗ್ಗೆ ಕಾಂಗ್ರೆಸ್ ನಾಯಕಿ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಖೇದ ವ್ಯಕ್ತಪಡಿಸಿದ್ದಾರೆ. ಅವರು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಬರೆದುಕೊಂಡಿರುವ ರಮ್ಯಾ ಪ್ರಧಾನಿ ಮೋದಿವಯರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.ಅಪಘಾತದಲ್ಲಿ ಜಶೋದಾ ಬೆನ್ ಗೆ ಗಾಯವಾಗಿದ್ದು, ಚಿತ್ತೋರ್ ಘಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಶೋದಾ ಬೆನ್ ಜತೆಗೆ ಇಬ್ಬರು ಮಹಿಳೆಯರೂ ಇದ್ದರು ಎನ್ನಲಾಗಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್