ನಿರ್ಭಯಾ ಮಾದರಿ ಅತ್ಯಾಚಾರ ಸಂತ್ರಸ್ತೆ ಸಾವು

ಮುಂಬೈ| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (16:41 IST)
ಮುಂಬೈ: ನಿರ್ಭಯಾ ಮಾದರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಖಾಸಗಿ ಅಂಗಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪೈಶಾಚಿಕ ಕೃತ್ಯ ಮೆರೆದ ಘಟನೆ ಮುಂಬೈನಲ್ಲಿ ವರದಿಯಾಗಿತ್ತು. ಆ ಮಹಿಳೆ ಇದೀಗ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
 > ತೀವ್ರ ಅ‍ಸ್ವಸ್ಥಳಾಗಿದ್ದ ಮಹಿಳೆಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದದ್ದಾಳೆ ಎಂದು ತಿಳಿದುಬಂದಿದೆ.>   ಮೊನ್ನೆ ನಿರ್ಭಯಾ ಮಾದರಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಕೃತ್ಯವೆಸಗಿದ ಬಳಿಕ ಸಂತ್ರಸ್ತೆಯನ್ನು ಟೆಂಪೋವೊಂದರಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದ. ಸ್ಥಳೀಯರು ಮಹಿಳೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಘಟನೆ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :