ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಆ ಬಾಲಕಿಯು ಗರ್ಭ ಧರಿಸಲು ಕಾರಣನಾದ ಯುವಕನೊಬ್ಬನಿಗೆ ನಾಗ್ಪುರ ನ್ಯಾಯಾಲಯ ಸೋಮವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕ್ರೂರ ಆರೋಪಿಯನ್ನು ಕಟೋಲ್ ನಿವಾಸಿ ಆಕಾಶ್ ಯೆದಾನಿ (23) ಎಂದು ಹೇಳಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೆ.ಜಿ.ರಥಿ ಅವರು ಐಪಿಸಿ ಸೆಕ್ಷನ್ 376 (2) (3), 506 ಮತ್ತು ಲೈಂಗಿಕ ಅಪರಾಧಗಳಿಂದ