ಹೈದರಾಬಾದ್ : ಹೈದರಾಬಾದ್ನಲ್ಲಿ ನಡೆದ ಗ್ಯಾಂಗ್ ರೇಪ್ ನಗರವನ್ನೆ ತಲ್ಲಣಗೊಳಿಸಿದೆ.ಇದರ ಬೆನ್ನಲ್ಲೆ ಮತ್ತೆರಡು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿರುವುದು ನಗರವನ್ನೆ ಬೆಚ್ಚಿಬಿಳಿಸಿದೆ. ಒಂದು ಪ್ರಕರಣದಲ್ಲಿ, ಹೈದರಾಬಾದ್ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಕೊಂಡೂರ್ಗ್ ಗ್ರಾಮದ ಕ್ಯಾಬ್ ಚಾಲಕನೊಬ್ಬ ತನ್ನ ಮನೆಗೆ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ನಂತರ ಸ್ನೇಹಿತನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾರೆ.ಕ್ಯಾಬ್ ಚಾಲಕ ಶೇಕ್ ಕಲೀಂ ಅಲಿ (36) ತನ್ನ ಸ್ನೇಹಿತ ಲುಕ್ಮಾನ್ ಅಹಮದ್ ಯಜ್ದಾನಿ (36) ಬಂಧಿತ ಆರೋಪಿ.