ಕುಟುಂಬದ ಸದಸ್ಯರೇ ತನ್ನ ಮೇಲೆ ಅತ್ಯಾಚಾರವೆಸಗಿರುವುದನ್ನು ಬಹಿರಂಗಪಡಿಸಲು ಮಹಿಳೆಯೊಬ್ಬಳು ವಿಚಿತ್ರವಾದ ಪ್ರತಿಭಟನೆಯನ್ನು ಹಮ್ಮಿಕೊಂಡು ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಉತ್ತರಪ್ರದೇಶದ ರಾಜಧಾನಿ ಲಕ್ನೋದಿಂದ 90 ಕಿ.ಮೀ ದೂರದಲ್ಲಿರುವ ಕಾನ್ಪುರ್ನಲ್ಲಿ ಸಪ್ನಾ(ಹೆಸರು ಬದಲಿಸಲಾಗಿದೆ) ಎನ್ನುವ ಮಹಿಳೆ ಪ್ರತಿಭಟನೆಗೆ ಕತ್ತೆಗಳನ್ನು ಬಳಸಿಕೊಂಡು ಕತ್ತೆಗಳ ಕೊರಳಲ್ಲಿ ಬ್ಯಾನರ್ ಲಗತ್ತಿಸಿ ತನ್ನ ಮೇಲೆ ಅತ್ಯಾಚಾರವೆಸಗಿರುವವರು ಹೆಸರುಗಳನ್ನು ನೇತು ಹಾಕಿದ್ದಾಳೆ. ತನ್ನ ಪತಿಯ ಅಂಗಡಿಯ ಮುಂದೆ ಅತ್ಯಾಚಾರವೆಸಗಿರುವ ಆರೋಪಿಗಳ ಹೆಸರುಗಳಿರುವ ಬ್ಯಾನರ್ಗಳನ್ನು ಕತ್ತೆಗಳ ಕುತ್ತಿಗೆಗೆ ಹಾಕಿ