ಹೊಸದಿಲ್ಲಿ : ಕೊರೊನಾದ ಹೊಸ ರೂಪಾಂತರಿ ವೈರಾಣು ಓಮಿಕ್ರಾನ್ ಸೋಂಕಿನ ಪ್ರಕರಣಗಳು ಜನವರಿ, ಫೆಬ್ರವರಿ ತಿಂಗಳಿನಲ್ಲಿ ದೇಶಾದ್ಯಂತ ತೀವ್ರವಾಗಿ ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ಹೇಳಿರುವ ಕೇಂದ್ರ ಸರಕಾರವು, ಹೊಸ ರೂಪಾಂತರಿಯು ಡೆಲ್ಟಾದಷ್ಟು ತೀವ್ರವಾಗಿರುವುದಿಲ್ಲ ಎಂದು ತಿಳಿಸಿದೆ.ಓಮಿಕ್ರಾನ್ ತೀವ್ರವಾಗಿ ಪ್ರಸರಣ ಹೊಂದಿದರೂ ತೀರಾ ಅಪಾಯಕಾರಿಯಲ್ಲ. ಡೆಲ್ಟಾಗಿಂತಲೂ ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಈ ಸೋಂಕು ಉಂಟುಮಾಡಲಿದೆ. ಏಕೆಂದರೆ ಸಾಂಕ್ರಾಮಿಕ ಪ್ರಸರಣದ ಅಂತ್ಯ ಭಾಗದಲ್ಲಿನಾವಿದ್ದೇವೆ, ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು