ಸುಮಾರು 50ಕ್ಕೂ ಹೆಚ್ಚು ಏಕಾಂಗಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಹಣ, ಚಿನ್ನ ಲೂಟಿ ಮಾಡಿದ್ದ ಕುಖ್ಯಾತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 28 ವರ್ಷ ವಯಸ್ಸಿನ ಆರೋಪಿ ಮದನ್ ಅರಿವಲಗಮ್, ಮನೆಯಲ್ಲಿ ಮಹಿಳೆಯರು ಏಕಾಂಗಿಯಾಗಿದ್ದಾಗ ಮನೆಗೆ ನುಗ್ಗಿ ಅವರನ್ನು ಬೆದರಿಸಿ ಅತ್ಯಾಚಾರವೆಸಗುತ್ತಿದ್ದ. ಅತ್ಯಾಚಾರವೆಸಗುವ ವಿಡಿಯೋ ತೆಗೆದು ಹಣ ನೀಡದಿದ್ದಲ್ಲಿ ಇಂಟರ್ನೆಟ್ನಲ್ಲಿ ಹಾಕುವ ಬೆದರಿಕೆಯೊಡ್ಡುತ್ತಿದ್ದ ಎಂದ ಪೊಲೀಸ್ ಮೂಲಗಳು ತಿಳಿಸಿವೆ. ಅತ್ಯಾಚಾರಕ್ಕೊಳಗಾದ ಮಹಿಳೆಯರು, ಯುವತಿಯರು ಮರ್ಯಾದೆಗೆ ಹೆದರಿ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ.