ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಗಲ್ಲು: ಆಗ್ರಹಕ್ಕೆ ಧ್ವನಿಗೂಡಿಸಿದ ಸಂಸದೆ ಸುಮಲತಾ ಅಂಬರೀಶ್

ಬೆಂಗಳೂರು| Krishnaveni K| Last Modified ಭಾನುವಾರ, 1 ಡಿಸೆಂಬರ್ 2019 (08:55 IST)
ಬೆಂಗಳೂರು: ಹೈದರಾಬಾದ್ ನಲ್ಲಿ ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಎಂಬ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಅಮಾನುಷವಾಗಿ ಕೊಲೆಗೈದ ಪ್ರಕರಣದ ಬಳಿಕ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು ಎಂಬ ಕೂಗು ಹೆಚ್ಚಿದೆ.

 
ಅತ್ಯಾಚಾರಿಗಳನ್ನು ನಿರ್ದಯವಾಗಿ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂಬ ಕೂಗಿಗೆ ಇದೀಗ ಸಂಸದೆ ಸುಮಲತಾ ಅಂಬರೀಶ್ ಕೂಡಾ ಧ್ವನಿಗೂಡಿಸಿದ್ದಾರೆ. ಟ್ವಿಟರ್ ಪೇಜ್ ನಲ್ಲಿ ಸುಮಲತಾ ಈ ಬಗ್ಗೆ ಬಂದ ಅಭಿಪ್ರಾಯಗಳನ್ನು ರಿಟ್ವೀಟ್ ಮಾಡಿದ್ದಾರೆ. ಅಲ್ಲದೆ ನನ್ನ ಅಭಿಪ್ರಾಯವೂ ಇದೇ ಎಂದು ಬರೆದುಕೊಂಡಿದ್ದಾರೆ.
 
ಅಲ್ಲದೆ ಭಾವುಕರಾಗಿ ಟ್ವೀಟ್ ಮಾಡಿರುವ ಸುಮಲತಾ ಎಲ್ಲಾ ರೀತಿಯ ಪೊಲೀಸ್ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಇದ್ದೂ ನಾವು ಮತ್ತೆ ಅಮಾನುಷ ಕೃತ್ಯದ ಮುಂದೆ ಅಸಹಾಯಕರಾಗಿದ್ದೇವೆ. ಮತ್ತೊಬ್ಬ ಹೆಣ್ಣು ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :