ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ಮಾರುಕಟ್ಟೆಗೆ ಆಘಾತ ನೀಡಿದ್ದಾರೆ. ಏಕಾಏಕಿ ರೆಪೋ ದರ 40 ಅಂಶಗಳಷ್ಟು (ಶೇ.0.40)ರಷ್ಟು ಏರಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ನಗದು ಮೀಸಲು ದರವನ್ನು (ಸಿಆರ್ ಆರ್) 50 ಅಂಶಗಳಷ್ಟು ( ಶೇ.0.50) ರಷ್ಟು ಏರಿಸಿದ್ದಾರೆ. ಈಗ ಪರಿಷ್ಕೃತ ರೆಪೊದರ ಶೇ.4.40ಕ್ಕೆ ಮತ್ತು ಸಿಆರ್ ಆರ್ ದರವು 4.5ಕ್ಕೆ ಏರಿದೆ. ತೀವ್ರವಾಗಿ ಏರುತ್ತಿರುವ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಬಡ್ಡಿದರ ಏರಿಕೆ ಮಾಡಲಾಗಿದೆ.