ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಸಂಯುಕ್ತ ಜನತಾದಳ (ಜೆಡಿಯು) ನಾಯಕರು ಬಂಡಾಯ ಕಹಳೆ ಮೊಳಗಿಸಿದ್ದು, ಉದಯ್ ನಾರಾಯಣ್ ಚೌಧರಿ ಅವರಿಗೆ ಬೆಂಬಲ ಸೂಚಿಸಿ 300 ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ದಲಿತ ಮುಖಂಡರೂ ಆದ ಚೌಧರಿ ಅವರ ಪ್ರಾಬಲ್ಯವಿರುವ ಗಯಾ ಜಿಲ್ಲೆಯ ನಕ್ಸಲ್ ಹಾವಳಿ ಪೀಡಿತ ಇಮಾಂಗಂಜ್ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಯು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.