ದಾಖಲೆ ಮಾಡುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ| Krishnaveni K| Last Modified ಗುರುವಾರ, 10 ಜೂನ್ 2021 (09:47 IST)
ನವದೆಹಲಿ: ದಿನೇ ದಿನೇ ಇಂಧನ ಬೆಲೆ ಗಗನಕ್ಕೇರುತ್ತಿರುವುದು ಮೊದಲೇ ಸಂಕಷ್ಟದಲ್ಲಿರುವ ಜನರ ಆಕ್ರೋಶಕ್ಕೆ ಕಾರಣವಾಗಿದೆ.

 
ಮೇ ಮೊದಲ ವಾರದಿಂದಲೇ ಪ್ರತಿನಿತ್ಯ ಏರಿಕೆ ಕಾಣುತ್ತಿರುವ ತೈಲ ಬೆಲೆ ಈಗ ಶತಕದ ಗಡಿಗೆ ಬಂದಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 95.56 ರೂ. ಇದ್ದರೆ ಡೀಸೆಲ್ ದರ 86.47 ರೂ.ಗೆ ಬಂದು ತಲುಪಿದೆ.
 
ಮುಂಬೈ, ರಾಜಸ್ಥಾನ, ತೆಲಂಗಾಣದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 98.75, ರೂ., ಡೀಸೆಲ್ 91.67 ಗೆ ಏರಿಕೆಯಾಗಿದೆ. ಇದೇ ರೀತಿಯಾದರೆ ಮುಂದೊಂದು ದಿನ ಡೀಸೆಲ್ ಬೆಲೆಯೂ 100 ಕ್ಕೇರಲಿದೆ.
ಇದರಲ್ಲಿ ಇನ್ನಷ್ಟು ಓದಿ :